ಕೋರಿಯೋಲಿಸ್, ಗ್ಯಾಸ್ಪರ್ಡ್ ಡ
1792-1843. ಫ್ರೆಂಚ್ ಭೌತ ವಿಜ್ಞಾನಿ.  ಕೋರಿಯೋಲಿಸ್ ಪರಿಣಾಮಗಳ (ನೋಡಿ- ಕೋರಿಯೋಲಿಸ್-ಪರಿಣಾಮಗಳು) ಆವಿಷ್ಕರ್ತೃ.  ಚಲನಶಕ್ತಿ (ಕೈನೆಟಿಕ್ ಎನರ್ಜಿ) ಮತ್ತು ಕಾರ್ಯ ಎಂಬ ಭೌತ ಪರಿಕಲ್ಪನಗಳಿಗೆ ಆಧುನಿಕ ವ್ಯಾಖ್ಯೆಗಳನ್ನು ಪ್ರಥಮವಾಗಿ ನೀಡಿದಾತ. ಚಲನಶಕ್ತಿ= ಳಿ mv2 (m ವಸ್ತುವಿನ ದ್ರವ್ಯರಾಶಿ, v ಅದರ ವೇಗ) ಕಾರ್ಯ=ಈಟ (ಈ ಬಲ, ಟ ಬಲದ ದಿಶೆಯಲ್ಲಿ ವಸ್ತು ಚಲಿಸಿದ ದೂರ)-ಇವೇ ಆ ವ್ಯಾಖ್ಯೆಗಳು.  ಆವರ್ತಿಸುತ್ತಿರುವ ಒಂದು ಮೈಯ ಮೇಲಿನ ಚಲನೆಯ ಗತಿವಿಜಾÐನ ಕೋರಿಯೋಲಿಸ್‍ನ ವಿಶೇಷಾಸಕ್ತಿ (1835).  ಇದನ್ನು ಪ್ರಾಯೋಗಿಕವಾಗಿಯೂ ಗಣಿತೀಯವಾಗಿಯೂ ವಿಶ್ಲೇಷಿಸಿ ಇಂಥ ಒಂದು ಕಣದ (ಉದಾಹರಣೆಗೆ ಭೂಮಿಯ ಮೈಮೇಲೆ ಅಥವಾ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದೊಳಗೆ ಚಲಿಸುತ್ತಿರುವ ವಸ್ತುಗಳು) ಚಲನೆಯ ಗಣಿತಾಭ್ಯಾಸವನ್ನು ನ್ಯೂಟೋನಿಯನ್ನು ಚೌಕಟ್ಟಿನ ವ್ಯಾಪ್ತಿಯೊಳಗೆ ಅಡಕವಾಗಿಸಲು ಎರಡು ಕಾಲ್ಪನಿಕ ಬಲಗಳ ಅನಿವಾರ್ಯತೆಯನ್ನು ಕಂಡುಕೊಂಡ.  ಇವೇ ಕೋರಿಯೋಲಿಸ್ ಬಲ ಮತ್ತು ಕೇಂದ್ರಾಪಗಮನ ಬಲ.

ಕೋರಿಯೋಲಿಸ್ ಹುಟ್ಟಿದ್ದು ಪ್ಯಾರಿಸಿನಲ್ಲಿ 1792, ಫೆಬ್ರುವರಿ 21 ರಂದು ಮತ್ತು ಕಾಲವಾದದ್ದು ಪ್ಯಾರಿಸಿನಲ್ಲಿ 1843, ಸೆಪ್ಟೆಂಬರ್ 17 ರಂದು.							    			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ